ಯೇಸುವು ಉತ್ತಮನೆಂದು ರುಚಿಸಿರಿ-Yesuvu uttamanendu ruchisiri

ಯೇಸುವು ಉತ್ತಮನೆಂದು ರುಚಿಸಿರಿ ಆತ ಸರ್ವೋತ್ತಮನೆಂದು ಕೀರ್ತಿಸಿರಿ ನೀತಿವಂತರೆ ಘೋಷಿಸಿರಿ ನೀತಿಯ ಪ್ರಭುವ ಸ್ತುತಿಸಿರಿ ನೀತಿವಂತ ಕಷ್ಟಗಳಿಂದ ಕಟ್ಟಲ್ಪಟ್ಟರು ಯೇಸುವು ಅವನನ್ನು ಬಿಡಿಸುವನು ಹಗಲಿನಲ್ಲಿ ಮೇಘಸ್ತಂಭವಾಗಿ ಇರುಳಿನಲ್ಲಿ ಅಗ್ನಿಸ್ತಂಭವಾಗಿ ಕಾಯುವನು ಉನ್ನತನು ನೆನ್ನೆಯು ಈ ಹೊತ್ತು ಬದಲಾಗನು ಯೇಸುವು ಸದ್ಭಕ್ತರಿಗೆ ಆಪ್ತಮಿತ್ರನು ಸ್ತೋತ್ರಕ್ಕೆ ಎಂದು ಆತಯೋಗ್ಯನು ಆತನ ಕೃಪೆಯಲ್ಲಿ ನಿರೀಕ್ಷಿಸುವ ಆತನ ಕೃಪೆಯನ್ನು ಆನಂದಿಸುವ ಭಕ್ತರನ ಕಾಯುವನು ಆತನ ಪ್ರೀತಿಯು ನಿರಂತರವು

Read more