ಪ್ರಾರ್ಥನಾತ್ಮನಾ ನೀಡಯ್ಯಾ-Prarthanatmana nidayya

  ಪ್ರಾರ್ಥನಾತ್ಮನಾ  ನೀಡಯ್ಯಾ ಪ್ರಾರ್ಥನೆ ಮಾಡಬೇಕು   ಸ್ತೋತ್ರ ಬಲಿ ವಿಜ್ಞಾಪನೆ ಯಾವಾಗಲೂ ನಾ ಅರ್ಪಿಸಬೇಕು   ಸುಖ ತೊರೆದು ಉಪವಾಸದಿ ಪ್ರಾರ್ಥನೆಯಲ್ಲಿ ನಾ ನಿಲ್ಲಬೇಕು   ದೇಶಕ್ಕಾಗಿ ಗೋಳಾಡಿ ಒಡಕಿನಲ್ಲಿ ನಾ ನಿಲ್ಲಬೇಕು   ಮೊಣಕಾಲೂರಿ ಕೈಗಳೆತ್ತಿ ಕಣ್ಣೀರಿಂದ ಪ್ರಾರ್ಥಸಬೇಕು   ಲೋಕ ಮರೆತು ಸ್ವಾರ್ಥ ತೊರೆದು ನಿನ್ ಪಾದದಲ್ಲೇ ನಾನಿರಬೇಕು  

Read more