ನನ್ನೇಸು ರಾಜ ಸ್ತೋತ್ರ ಸ್ತುತಿ-Nannesu raja stotra sthuti

ನನ್ನೇಸು ರಾಜ ಸ್ತೋತ್ರ ಸ್ತುತಿ ಸ್ತೋತ್ರ ಸ್ತುತಿ ಸ್ತೋತ್ರ ಜೀವಂತ ದಿನವೆಲ್ಲಾ   ಸ್ತುತಿ ಘನ ಮಹಿಮೆಯಲ್ಲಾ ನಿಮಗೆ ಸಲ್ಲಿಸುವೆ ಹರುಷದಿ ಅರ್ಪಿಸಿ ಸ್ತೋತ್ರದ ಬಲಿಯ ಆರಾಧಿಸುವೆ ನಿನ್ನ   ಕನಿಕರವುಳ್ಳವನೇ ಮನ ಮರುಗುವ ದೇವನೇ ಪ್ರೀತಿ ತಾಳ್ಮೆ ದೀರ್ಗಶಾಂತಿ ತುಂಬಿ ಇರುವವನೆ   ಕೂಗುವ ಎಲ್ಲರಿಗೂ ಬಹು ಸಮೀಪ ಇರುವವನೆ ಕಷ್ಟದಿ ಕರೆಯುವ ಕುಗನ್ನು ಕೇಳಿ ಬಿಡುಗಡೆ ಕೊಡುವವನೆ   ಸೃಷ್ಟಿಗಿಂತಾ ಮೊದಲೇ ನನಗಾಗಿ ಜಡಿಯಲ್ಪಟ್ಟೆ ದುಷ್ಟನ ಜೀವನ ನಡೆಸಿದ ನನಗೆ ನವಜೀವ ಕರುಣಿಸಿದೆ

Read more