ಕಣ್ಣೆತ್ತಿ ಪರ್ವತವನ್ನೇ ನೋಡುವೆನು-Kannetti Parvatavanne Noduvenu

ಕಣ್ಣೆತ್ತಿ ಪರ್ವತವನ್ನೇ ನೋಡುವೆನು… ಭೂಮಿ ಗಗನ ಮಾಡಿದವನ ನೋಡುವೆನು… ಕಾಲು ಕದಲದೆ ಕಾಯುವನು,ಕರ್ತನು ಎಂದಿಗೂ ನಿದ್ರಿಸನು ತೂಕಡಿಸಿ ನಿದ್ರಿಸನು. ನಮ್ಮನ್ನು ಕಾಯುವನು ಕರ್ತನು ನನ್ನ ಕಾಯುವನು ನನಗೆ ನೆರಳಾಗಿ ಬರುವನು. ಹಗಲಿನಲ್ಲೂ ಇರುಳಿನಲ್ಲೂ ನನ್ನನ್ನು ಕಾಯುವನು ಎಲ್ಲಾ ಕೇಡಿಗೂ ನನ್ನನ್ನು ಕರ್ತನು ಬಿಡಿಸಿ ಕಾಯುವನು. ಅನುದಿನವು ಕಾಯುವನು ನನ್ನ ಆತ್ಮವನ್ನು ಹೋಗುವಾಗಲೂ ಕಾಯುವನು ಬರುತ್ತಿರುವಾಗಲೂ ಕಾಯುವನು ಈ ದಿನವೂ ಅನುದಿನವೂ ಎಂದೆಂದೂ ಕಾಯುವನು  

Read more