ಹೆಸರಿಡಿದು ನನ್ನನು ಕರೆದವನೆ
ಕಣ್ಮಣಿಯಾಗೇ ನನ್ನ ಕಾಯುವವನೆ
ನನ್ನ ಬಾಳಿನ ಬೆಳಕಾಗಿ ಇರುವವನೆ
ನನಗೆ ಸಂತೋಷ ಸಮಾಧಾನ ನೀಡುವವನೆ

ಎಲ್ – ಶಡಾಯ್ ಎಲ್ – ಶಡಾಯ್
ಸರ್ವ ಶಕ್ತನು ನೀನೆ
ಎಲ್ – ರೋಹಿ ಎಲ್- ರೋಹಿ
ನನ್ನನು ಕಾಣುವವನೆ

1 ) ಕೆಂಪು ಸಮುದ್ರ ಅಡ್ಡವಿದ್ದರು
ಫರೋಹನ ಸೈನ್ಯವು ಹಿಂದೆ ಬಂದರು
ಸ್ತುತಿಯಿಂದಲೆ ಮುಂದೆ ಹೋಗುವೆ
ಯೇಸು ನಾಮದಿಂದ ಜಯ ಹೊಂದುವೆ
ಎಲ್ – ಶಡಾಯ್ ….

2 ) ಯೇರಿಕೋ ಕೋಟೆ ಹಾಗೆ ಕಷ್ಟ ಬಂದರು
ಎಲ್ಲಾ ದಾರಿಯು ಮುಚ್ಚಲ್ಪಟ್ಟರು
ಸ್ತುತಿಯಿಂದಲೆ ಮುಂದೆ ಹೋಗುವೆ
ಯೇಸು ನಾಮದಿಂದ ಜಯ ಹೊಂದುವೆ
ಎಲ್ – ಶಡಾಯ್ ….

Leave a reply

Your email address will not be published. Required fields are marked *