ಹುಡುಕಿ ಬಂದ ಓ ಯೇಸಯ್ಯಾ
ಪ್ರೀತಿಸಿದ ಕೃಪಾ ಪೂರ್ಣನೆ ||
ಹಸಿದ ಹೊಟ್ಟೆಗೆ ಅನ್ನ ನೀಡಿದಿ
ಆಳುವ ಮುಖದಲ್ಲಿ ಸಂತೋಷದ ನಗೆ ತಂದೆ ||

ಕೃಪೆ ತೋರಲು ಕಾದಿರುವೆ
ಉನ್ನತ ಉನ್ನತವಾಗಿ ನಿಂತಿರುವೆ
ನ್ಯಾಯಸ್ವರೂಪನೆ ಉದ್ಧಾರಕನೆ
ಆತ್ಮರಕ್ಷಣೆಯ ಮೇಸ್ಸಿಯನೆ ||

ಪರಲೋಕದಿಂದ ಇಳಿದು ಬಂದ
ಜೀವವುಳ್ಳ ರೊಟ್ಟಿ ನನ್ ಪ್ರಿಯ ಯೇಸುವೆ
ಈ ರೊಟ್ಟಿಯನು ತಿನ್ನುವ ಪ್ರತಿಯೊಬ್ಬ
ಸದಾಕಾಲ ಬದುಕುವನು

ಪರಿಶುದ್ಧಾತ್ಮವ ದಯಪಾಲಿಸಿ
ಮನೋನೇತ್ರಗಳ ಬೆಳಗಿಸಿರುವೆ ||
ಅಂತರ್ಯವೂ ಹರ್ಷಿಸಿತು
ನಿನ್ನ ಅದ್ಭುತ ಧ್ಯಾನಿಸಿ ಧ್ಯಾನಿಸಿ ||

ನನ್ನ ಯೇಸು ಜೀವಿಸುವ
ನಾನು ಸದಾ ಜೀವಿಸುವೆ ||
ಶೀಘ್ರದಲ್ಲಿಯೇ ನನ್ನೇಸು ಬರುವ
ಮಹಿಮೆಯೊಡನೆ ನಾ ಎತ್ತಲ್ಪಡುವೆ ||

Leave a reply

Your email address will not be published. Required fields are marked *