ಹುಟ್ಟು ಸಾವುಗಳ ನಡುವೆ
ಸೃಷ್ಠಿ ಕರ್ತನ ಸ್ಮರಿಸಿಕೋ
ಪಾಪಕೊಡುವ ಸಂಬಳ ಮರಣ
ಅದನ್ನು ಮಾತ್ರ ನೀ ತಿಳಿದುಕೋ – 2

1.ನೀತಿವಂತನು ಇಲ್ಲ ಒಬ್ಬನಾದರು ಇಲ್ಲ
ಎಲ್ಲ ಪಾಪಿ ಮಾಡಿದ ಮನುಜರಿಲ್ಲಿ – 2
ಎಲ್ಲ ಪಾಪಿ ಮಾಡಿದ ಮನುಜರು

2.ಶರೀರದ ಆಸೆಗಾಗಿ ನಿನ್ನಾತ್ಮವನ್ನು ನೀನು
ನರಕದಲ್ಲಿ ಕಳಿಸಬೇಡ ಮನುಜ – 2
ನರಕದಲ್ಲಿ ಕಳಿಸಬೇಡ

3.ಮೂರು ದಿನದ ಸಂತೆಯಲಿ
ಪಾಪ ಮಾಡ ಬ್ಯಾಡಣ್ಣ
ನಿನಗೆ ನ್ಯಾಯ ತೀರ್ಪು ಕಾದಿದೆ – 2

ಏನೆಂದು ಹೇಳಲಿ ನರಕದ ಗತಿಯನ್ನು
ಮನುಜ ಮನುಜ ಕಂಡುಕೋ ಸೃಷ್ಠಿ ಕರ್ತನನ್ನು

Leave a reply

Your email address will not be published. Required fields are marked *