ಹಲ್ಲೆಲೂಯಾ ಆರಾಧನೆ ಯೇಸು ರಾಜನಿಗೆ ಆರಾಧನೆ …..
ನನ್ನ ದೇಹದಲ್ಲಿ ಉಸಿರಿರುವ ತನಕ
ಸಾಗುತ್ತಿರುವುದು ಸ್ತುತಿ ಆರಾಧನೆ || ಹಲ್ಲೆಲೂಯಾ ||

1.ಎಷ್ಟೋಂದು ಮಧುರವೋ ದೇವ ನಿನ್ನ ನಾಮವು
ವರ್ಣಿಸಲಾಗದು ಅಪ್ಪ ನಿನ್ನ ಪ್ರೀತಿಯು
ಯೆಹೋವ ಎಲ್ ಷಡಾಯ್ ಸರ್ವಶಕ್ತನೆ ||

2.ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿಸುವವನೇ
ಕಣ್ಮಣಿಯ ಹಾಗೆ ನನ್ನ ಕಾಯುವಾತನೇ
ಯೆಹೋವ ರೂವಾ ನನ್ನ ಒಳ್ಳೇ ಕುರುಬನೇ ||

3.ಕಣ್ಣು ಮುಚ್ಚಿದರೆ ಯೇಸು ನಿನ್ನ ಜ್ಞಾಪಕ
ಈಗ ನನ್ನ ಮೇಲೆ ಸುರಿಸು ಅಗ್ನಿಯ ಅಭಿಷೇಕ
ಯೆಹೋವಾ ರಾಫಾ ನನ್ನ ಸೌಖ್ಯದಾತನೇ ||

Leave a reply

Your email address will not be published. Required fields are marked *