ಹಣ ಹಣ ಎಂದರೆ ಜೀವ ಬಿಡುತ್ತಾರೆ ಜನ
ಯೇಸು ಹೇಳಿದ ಹಣವಂತನ ಕಥೆಯ ಕೇಳಿರಣ್ಣ

1.ಹಣವಂತನೊಬ್ಬ ಯೇಸು ಬಳಿಗೆ ಬಂದ ನೋಡಿ
ನಿತ್ಯಜೀವ ಪಡೆಯಲು ಏನು ಮಾಡಬೇಕು ಹೇಳಿ
ಯೇಸು ಹೇಳಿದರು ದೇವರ ಆಜ್ಞೆ ಹಿಂಬಾಲಿಸು
ಆಜ್ಞೆಯಂತೆ ನಡೆದಿರುವೇ ಏನು ಕಡಿಮೆ ಹೇಳಿ ||

2.ಯೇಸು ಹೇಳಿದರು ಹಣವಂತನನ್ನು ನೋಡಿ
ಬಡವರಿಗೆ ದಾನ ಮಾಡು ಆಸ್ತಿಯೆಲ್ಲಾ ಮಾರಿ ಬಂದು
ಹಿಂಬಾಲಿಸು ಎಂದು ಯೇಸು ಹೇಳಿದರು
ಪರಲೋಕದಲ್ಲಿ ಸಿರಿಸಂಪತ್ತು ಸಿಗುವದು ಎಂದು ||

3.ಹಣವಂತನ ಮುಖ ಬಾಡಿತು ಇದನ್ನು ನೋಡಿ
ದೇವರಿಗಿಂತೆ ಹೆಚ್ಚು ಪ್ರೀತಿ ಹಣದ ಮೇಲೆ ನೋಡಿ
ನಿತ್ಯಜೀವ ಬೇಡ ಎಂದು ಹಿಂದೆ ಹೋದ ನೋಡಿ
ಹಣದ ಆಸೆ ನಿತ್ಯಜೀವಕ್ಕೆ ಅಡ್ಡಿ ಆಯ್ತು ನೋಡಿ ||

4.ದೇವರಿಗಿಂತ ಹೆಚ್ಚು ಹಣ ಪ್ರೀತಿಸಬೇಡಿ ನೀವು
ದೇವರನ್ನು ಧನ ಕೂಡ ಸೇವಿಸಲಾರಿ ಹಣದ ಆಸೆಯಿಂದ
ಆತ್ಮ ನಷ್ಟ ಪಡಿಸಬೇಡಿ ಯೇಸುವನ್ನು ಪ್ರೀತಿಸಿ
ನಿಮ್ಮ ಆತ್ಮ ರಕ್ಷಣೆಯಾಗಲಿದೆ ||

1 comment

  1. christopher February 4, 2017 at 2:42 pm

    Reply

    Wounderfull song very meaning full song

Leave a reply

Your email address will not be published. Required fields are marked *