ಸ್ತುತಿಸಬೇಕು ಯೇಸಯ್ಯಾ ಸ್ತುತಿಸಬೇಕು ನನ್ನಯ್ಯ
ಆರಾಧನೆ || ಆ..ಆ….ಆರಾಧನೆ ||
1.ಪಾಪದ ಹೃದಯ ನನ್ನಿಂದ ತೊರೆದು
ನಾ ನಿನ್ನ ಸ್ತುತಿಸಬೇಕಯ್ಯ
ನಿರ್ಮಲ ಮನಸ್ಸಿನಿಂದ ನಂಬಿಗಸ್ತನಾಗಿ
ಜೀವದಿಂದ ಸ್ತುತಿಸಬೇಕಯ್ಯ
|| ಆರಾಧನೆ 4 ||

2.ನಾನು ಎಂಬ ಅಹಂಕಾರ ಮರೆತು
ಇಷ್ಟವಾದ ಯಜ್ಞವಾಗುವೆ
ತಗ್ಗಿದ ಮನಸ್ಸಿನಿಂದ ಜಜ್ಜಿಹೋದ ಹೃದಯದಿಂದ
ನಾ ನಿನ್ನ ಸ್ತುತಿಸಬೇಕಯ್ಯ
|| ಆರಾಧನೆ 4 ||

3.ನಾಶನದ ಗುಂಡಿಯಿಂದ ಮೇಲಕ್ಕೆ ಎತ್ತಿ ನನ್ನ
ಬಂಡೆಮೇಲೆ ನಿಲ್ಲಿಸಿದನು
ನನ್ನ ಬಾಯಿಯಲ್ಲಿ ನೂತನ ಕೀರ್ತನೆಯ
ಹುಟ್ಟಿಸಿದ ನನ್ನ ದೇವರೆ
|| ಆರಾಧನೆ4||

4.ನಾನು ಪಟ್ಟ ದುಃಖ ನನ್ನ ಸುಖಕ್ಕಾಗಿಯೇ
ಉಪಕಾರ ನೆನೆಸಿ ಸ್ತುತಿಸುವೆ
ನನ್ನ ಆತ್ಮವನ್ನು ನಾಶನದ ಕೂಪದಿಂದ
ರಕ್ಷಿಸಿದ್ದು ನಿನ್ ಪ್ರೀತಿಯೇ
||ಆರಾಧನೆ4||

Leave a reply

Your email address will not be published. Required fields are marked *