ಮನಮರುಗುವ ನನ್ನ ದೇವರೇ
ಕಣ್ಣೀರು ಒರೆಸುವ ನನ್ನ ಯೇಸುವೇ
ನನ್ನ ದೇವರೇ ನನ್ನ ಯೇಸುವೇ ||
ನಿನ್ನ ಮರೆತು ನಾ ಬಾಳಲಾರೇನು

1.ನನ್ನ ಕಷ್ಟ ದುಃಖ ಯಾರಿಗೆ ಹೇಳಲಯ್ಯ
ಈ ಲೋಕ ಯಾತ್ರೆಯೊಳು ||
ಹೇಳುವುದಾದರೆ ಯೇಸಯ್ಯ ||
ನಿನ್ನ ಮುಂದೆ ಹೇಳಿ ನಾ ಅಳುವೆ ||

2.ನಿನ್ನ ನುಡಿಯು ನನ್ನ ಚೈತನ್ಯಗೊಳಿಸುತ್ತದೆ
ಆಪತ್ತಿನ ಕಾಲದಲ್ಲಿ ||
|| ನನ್ನ ಶರಣನೇ ಯೇಸಯ್ಯ
ನನ್ನ ಭದ್ರವಾದ ಕೋಟೆ ನಿನಯ್ಯ ||

3.ಸೋತ ಸಮಯದಲ್ಲಿ ನಿನ್ನ ದಿವ್ಯ ಹಸ್ತವು
ನನಗೆ ಬಲ ನೀಡಿದೆ ||
ನನ್ನ ಒಳ್ಳೆ ಪಾಲು ನೀನೆ ಯೇಸಯ್ಯ ||
ನಿನ್ನ ರಾಜ್ಯ ನೀತಿಗಾಗಿ ನಾ ದುಡಿಯುವೆ ||

4.ನಿನ್ನ ದರುಶನವ ನೋಡುತ್ತಿರುವೆ ಯೇಸಯ್ಯ
ಕತ್ತಲೆಯ ಲೋಕದಲ್ಲಿ ||
ಬೇಗನೆ ನೀ ಬಂದು ಯೇಸಯ್ಯ ||
ಮಹಿಮೆಯ ರಾಜ್ಯದೊಳಗೆ ನನ್ನ ಸೇರಿಸಯ್ಯ ||
ಮನಮರುಗುವ ||

Leave a reply

Your email address will not be published. Required fields are marked *