ಬಲದಿಂದಲೂ ಅಲ್ಲಾ ಪರಾಕ್ರಮವಲ್ಲಾ
ದೇವರಾತ್ಮನಿಂದ ಆಗುವದು ||
ಪರಿಶುದ್ಧ ಆತ್ಮನೇ ಸ್ವಾಗತ
ನಿನ್ನ ದಯೆಯನ್ನು ಸುರಿಸಲು ಸ್ವಾಗತ || ಬಲದಿಂದಲೂ ||

1.ದೊಡ್ಡ ಪರ್ವತವೇ ನೀನು ಎಷ್ಟುಮಾತ್ರ
ಜೇರುಬ್ಬಾಬೇಲನ ಮುಂದೆ ನೀನು ಸಮ ಭೂಮಿ ||
ಯೇಸುನಾಮ ಸಾರುತ್ತಾ ಬರುವನು
ಅದಕ್ಕೆ ದಯವಿರಲಿ ದಯವಿರಲಿ ಎಂದು ಸಾರುನಿ ||
ಬಲದಿಂದಲೂ ||

2.ಅಲ್ಪವಾದ ಪ್ರಾರಂಭದ ದಿನವನ್ನಾರು
ಅಲಕ್ಷ್ಯಮಾಡಲು ಸಾಧ್ಯವೋ ||
ಭೂಮಿಯನ್ನು ದೃಷ್ಟಿಸುವಾ ದೇವರು
ತೂಕದ ಗುಂಡನ್ನು ದಾಸನಲ್ಲಿ ಕಂಡನು ||

3.ಕರ್ತನ ಆತ್ಮವೂ ನಮ್ಮ ಮೇಲೆ
ಎಂದೆಂದಿಗೂ ನಮಗೆ ಬಿಡುಗಡೆ ||
ಆತ್ಮದಿಂದ ದಿನವೂ ತುಂಬಿ ಹಾಡುವೆವು
ನಾವು ಜಯಘೋಷ ಮಾಡಿ ಎಂದು ಸ್ತುತಿಸುವೆವು ||

Leave a reply

Your email address will not be published. Required fields are marked *