ತೊಲಗಿ ಹೋಗು ಸೈತಾನ ತೊಲಗಿ ಹೋಗು
ನಿನ್ನ ಆಯುಧವು ಒಂದು ಇಲ್ಲಿ ಫಲಿಸದು
ನಾನು ಯೇಸುವಿನ ರಕ್ತದಿಂದ ತೊಳೆಯಲ್ಪಟ್ಟೆ
ನನಗೇನು ಭಯವಿಲ್ಲ ಈ ಲೋಕದಲ್ಲಿ ||2||

ಎಷ್ಟೇ ಕಷ್ಟಗಳು ಬಂದರೂ
ಯೇಸುವಿನ ಬಲದಲ್ಲಿ ಮುರಿಯುವೆನು
ಕಾಲಿನ ಕೆಳಗೆ ಹಾಕಿ ನಿನ್ನ ತುಳಿಯುವೆನು
ಜಯಿಸಿರುವ ಯೇಸು ನನ್ನ ಉಂಟು

ಚಿನ್ನದಂತ ಮನೆಯು ಇಲ್ಲಿ ಹೋದರೂ
ಪರದಲ್ಲಿ ಚಿನ್ನದ ಮನೆ ಉಂಟು ಹರ್ಷಿಸುವೆ
ಓಟವನ್ನು ಜಯವಾಗಿ ಓಡುವೆನು
ನನ್ ಯೋಜನೆ ಪರಲೋಕವೆ

Leave a reply

Your email address will not be published. Required fields are marked *