ಎಲ್ಲಾರ ಹೇಳ್ತಾರ ಸ್ವರ್ಗಕ್ಕೆ ಹೋಗ್ತೀನಿ
ಎಲ್ಲಿಗೋಗ್ತಾರಣ್ಣಾ ||
ನನಗೊತ್ತಿಲ್ಲಿವರ ಬಣ್ಣ ನನಗೊತ್ತಿಲ್ಲಿವರ ಬಣ್ಣ ||

1.ಕಾಣಾಕ ಒಂದು ಕಾಣ್ತಾರ ಇವರು ಹೊಂಚ ಹಾಕತಾರ ||
ಹೋಗ್ತೀನಿ ಅಂತಾರ ದೇವರ ಮುಂದೆ ಹೆಂಗ ನಿಲ್ಲತಾರ ||
ಇವರ್ ಹೆಂಗ ನಿಲ್ಲತಾರ || ಎಲ್ಲಾರ ||

2.ಸುಳ್ಳಂತ ಹೇಳ್ತಾರ ಸಾವಿರ ಇವರ ಜಗಳ ಅಡತಾರ ||
ಕಚ್ಚತಾರ ಹಲ್ಲ ಮನದಾಗ ಇವರ ಹೆಂಗ ನಿಲ್ಲತಾರ ||
ಇವರ್ ಹೆಂಗ ನಿಲ್ಲತಾರ || ಎಲ್ಲಾರ ||

3.ತಿರುಗಿ ಬರ್ತಾನ ಯೇಸು ಸ್ವಾಮಿ ಲೆಕ್ಕ ಕೇಳತಾನ ||
ಬದುಕಿರೋರಿಗೂ ಸತ್ತವರಿಗೂ ನ್ಯಾಯ ನೀಡತಾನ ||
ಯೇಸು ನ್ಯಾಯ ನೀಡತಾನ || ಎಲ್ಲಾರ ||

Leave a reply

Your email address will not be published. Required fields are marked *