ಇನ್ಯಾರು ನಿನ್ನ ಆಪ್ತರು ಕ್ರಿಸ್ತೇಸು ಒಬ್ಬನೆ ಸದಾ
ಸ್ವೀಕರಿಸು ಈ ಆಪ್ತನಾ ಯೇಸು ನನ್ನಾತ್ಮ ರಕ್ಷಕ ||

1.ನಿನ್ನಾಪ್ತ ಯೇಸು ಬಂದನು ನಿಂಗಾಗಿ ಜಾತನಾದನು
ನಿನ್ನನ್ನು ಕೊಂಡುಕೊಂಡನು ನೀನಲ್ಲ ಶಾಪಗ್ರಸ್ತನು ||

2.ಲೋಕ ವಿಹಾರ..ದಾಪ್ತರು ನಿನ್ನಾತ್ಮ ಶಾಂತಿ ನೀಡರು
ಹೃದಯವ ತಿಳಿದಾತನು ಆತ್ಮದ ಆಪ್ತ ಕ್ರಿಸ್ತನು ||

3.ಮಹಿಮಾ ಸ್ಥಾನ ತ್ಯೆಜಿಸಿ ಪಾಪಿಯ ಸ್ಥಾನ ವಹಿಸಿ
ನಮ್ಮೆಲ್ಲ ದ್ರೋಹ ಸಹಿಸಿ ಪ್ರಾಣವ ಕೊಟ್ಟ ಆಪ್ತನೇ ||

4.ಪವಿತ್ರ ಐಕ್ಯಕ್ಕಾಗಿಯೇ ಕರೆಯುತ್ತಾನೆ ನಿನ್ನನ್ನು
ಸ್ವರ್ಗೀಯ ಕರೆ ಲಾಲಿಸಿ ಆಶ್ರಯಿಸೀ ಆಪ್ತನ ||

Leave a reply

Your email address will not be published. Required fields are marked *