ಆಕಾಶಕ್ಕೆ ಕೊನೆಯಿಲ್ಲ ಈ ಲೋಕ ನಮಗೆ ಸ್ಥಿರವಲ್ಲ || 3 ||
ಹೇ ಮಾನವ ಆಲಿಸು (4 )ಬರುವಾಗ ಬಂದೆ ಬರಿದಾಗಿಯೇ
ಇರುವಾಗ ಮಾಡಿದೆ ಮನದಾಸೆಗಳೆಲ್ಲಾ ||
ಬರುವಾಗ ಬರಿದಾಗಿ ಇರುವಾಗ ಅತಿಯಾಸೆ
ಹೋಗುವಾಗ ಜೀವನವೇ ಶೂನ್ಯ || 2 || ಹೇ ಮಾನವ ||

1.ಜಾತಿಗಾಗಿ ಹೋರಾಟ ಭೂಮಿಗಾಗಿ ಪರದಾಟ
ಮನು –ಮನುಜರಲ್ಲೇ ಹೊಡೆದಾಟ
ಈ ಲೋಕವನ್ನು ನೀ ಬಿಟ್ಟು ಹೋಗುವಾಗ
ಕೊನೆಯಲ್ಲಿ ಜೀವನವೇ ಶೂನ್ಯ || 2 || ಹೇ ಮಾನವ ||

2ಈ ಲೋಕವನ್ನೆಲ್ಲಾ ಸಂಪಾದನೆ ಮಾಡಿದರು
ನಿನ್ನಾತ್ಮ ನಷ್ಟಾದರೆ ಎನಿದೇ ಲಾಭ
ನಿನ್ನಾತ್ಮ ರಕ್ಷಣೆಗಾಗಿ ಶ್ರೀ ಯೇಸು ಶಿಲುಬೆಯಲ್ಲಿ
ನಿನಗಾಗಿ ಪ್ರಾಣವ ಕೊಟ್ಟ || 2 || ಹೇ ಮಾನವ || ಆಕಾಶಕ್ಕೆ ||

Leave a reply

Your email address will not be published. Required fields are marked *